ನೈಜ ಆರೋಗ್ಯಕರ ಜೀವನ ಶೈಲಿಗೆ ಸ್ವಾಗತ. ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯಕರ ಪರಿಸರದ ಸಮಾನ ಆಸಕ್ತಿ ಇರುವ ರೈತರು ಮತ್ತು ಗ್ರಾಹಕರು ಸಂಪರ್ಕಿಸುವ ಸ್ಥಳವನ್ನು ಕಲ್ಪಿಸಿಕೊಳ್ಳಿ. ತಾಜಾ, ಆಕರ್ಷಕ ಉತ್ಪನ್ನಗಳಿರುವ ಈ ಸ್ಥಳವು ಭೂಮಿಯನ್ನು ಪೋಷಿಸುವ ಸಮರ್ಪಿತ ಕೈಗಳ ಕಥೆಯನ್ನು ಹೇಳುತ್ತದೆ. ಇದು ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು. ನಾವು ಸಾವಯವ ಜೀವನಶೈಲಿಯನ್ನು ಅನುಸರಿಸುವ ಮತ್ತು ಪ್ರೋತ್ಸಾಹಿಸುವ ಸಮುದಾಯವಾಗಿದ್ದೇವೆ, ನಮ್ಮ ಆಹಾರವನ್ನು ಬೆಳೆಯುವವರು ಮತ್ತು ಅದರೊಂದಿಗೆ ಅವರ ಕುಟುಂಬಗಳನ್ನು ಪೋಷಿಸುವವರ ನಡುವೆ ಸೇತುವೆಯನ್ನು ನಿರ್ಮಿಸುತ್ತೇವೆ.
ಸಾವಯವ ಕೃಷಿಕ ಗ್ರಾಹಕ ಬಳಗದಲ್ಲಿ ನಾವು ವಿಷಮುಕ್ತ ಆಹಾರ ಸಂಸ್ಕೃತಿಯನ್ನು ಪೋಷಿಸಲು ಸಮರ್ಪಿತರಾಗಿದ್ದೇವೆ, ಪ್ರತಿ ಊಟದ ತಟ್ಟೆ ಮತ್ತು ಅಡುಗೆಮನೆಯನ್ನು ನೈಸರ್ಗಿಕ ಶುದ್ಧತೆಯ ತಾಣಗಳನ್ನಾಗಿ ಪರಿವರ್ತಿಸುವ ದೃಷ್ಟಿಯನ್ನು ಹೊಂದಿದ್ದೇವೆ. ನಮ್ಮ ಸಮುದಾಯದ ಉಪಕ್ರಮಗಳು ಸಾವಯವ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ಪರಿಸರ ಸುಸ್ಥಿರತೆಯನ್ನು ಪೋಷಿಸುವ ಗುರಿಯನ್ನು ಹೊಂದಿರುವ, ತೊಡಗಿಸಿಕೊಳ್ಳುವ ಚಟುವಟಿಕೆಗಳ ಹೂರಣವನ್ನೇ ಒಳಗೊಂಡಿದೆ. ನಮ್ಮ ಉದ್ದೇಶದ ಕೇಂದ್ರ ಭಾಗವು ನಮ್ಮ ಸಾಪ್ತಾಹಿಕ ಸಾವಯವ ಆಹಾರ ಉತ್ಪನ್ನಗಳ ಮಾರುಕಟ್ಟೆ. ಅಲ್ಲಿ ಸ್ಥಳೀಯ ರೈತರು ಮತ್ತು ಉತ್ಪಾದಕರು ತಮ್ಮ ಸಮೃದ್ಧ ಉತ್ಪನ್ನಗಳಿಂದ ತಾಜಾ, ಪೌಷ್ಟಿಕಾಂಶಗಳ ಗಣಿಯನ್ನೇ ಒದಗಿಸುತ್ತಾರೆ.
ಅದಲ್ಲದೆ, ಸಾವಯವ ಜೀವನದ ಆನಂದವನ್ನು ಆಚರಿಸುವ ಆಸಕ್ತಿದಾಯಕ ಮೇಳಗಳನ್ನು ನಾವು ನಿರ್ವಹಿಸುತ್ತೇವೆ, ಪ್ರಭಾವಶಾಲಿ ಕಾರ್ಯಾಗಾರಗಳು, ಮಾಹಿತಿ ನೀಡುವ ತರಗತಿಗಳು ಮತ್ತು ಪ್ರಜ್ಞಾಪೂರ್ವಕ ಗ್ರಾಹಕರ ಆಯ್ಕೆಗಳನ್ನು ಪ್ರೇರೇಪಿಸಲು ಸಾವಯವ ಉತ್ಪನ್ನಗಳ ಒಂದು ಸರಣಿಯೇ ಒಳಗೊಂಡಿದೆ.
ಶಿಕ್ಷಣ ಮತ್ತು ಪ್ರತಿಪಾದನೆ ನಮ್ಮ ಬದ್ಧತೆಯಲ್ಲಿ, ನಾವು ಸಾವಯವ ಕೃಷಿ ಮತ್ತು ತೋಟಗಳಿಗೆ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸುತ್ತೇವೆ. ಭಾಗವಹಿಸುವವರಿಗೆ ಸಾವಯವ ಕೃಷಿಯ ತತ್ವಗಳು ಮತ್ತು ಅಭ್ಯಾಸಗಳಲ್ಲಿ ತಲ್ಲೀನಗೊಳಿಸುವ ಅನುಭವ. ಈ ಉಪಕ್ರಮಗಳ ಮೂಲಕ, ನಾವು ವ್ಯಕ್ತಿಗಳನ್ನು ಅವರ ಆಹಾರದ ಮೂಲಗಳೊಂದಿಗೆ ಸಂಪರ್ಕಿಸಲು ಮಾತ್ರವಲ್ಲದೆ ಅವರ ಆರೋಗ್ಯ ಮತ್ತು ಪರಿಸರದ ಮೇಲೆ ಧನಾತ್ಮಕ ಪರಿಣಾಮ ಬೀರುವ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡಲು ಅವರಿಗೆ ಅಧಿಕಾರ ನೀಡುತ್ತೇವೆ.
ಸಾವಯವ ಜೀವನಶೈಲಿಯತ್ತ ಜನರನ್ನು ಮುನ್ನಡೆಸುವ ಮೂಲಕ ಅವರ ಆರೋಗ್ಯವನ್ನು ಸುಧಾರಿಸುವ ಆಳವಾದ ಬಯಕೆ ನಮ್ಮ ಪ್ರಯತ್ನಗಳ ಮೂಲ ಉದ್ದೇಶ. ವಿಷಮುಕ್ತ ಅಡಿಗೆಮನೆಗಳನ್ನು ರಚಿಸುವ, ಆರೋಗ್ಯಕರ ಸಮುದಾಯಗಳನ್ನು ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ಬೆಳೆಸುವ ನಮ್ಮ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿ.
ನಮ್ಮ ಸಾವಯವ ಸಮುದಾಯಕ್ಕೆ ಸುಸ್ವಾಗತ!
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಲ್ಲಿ ನಾವು ಕೇವಲ ವ್ಯಕ್ತಿಗಳ ಒಂದು ಗುಂಪಲ್ಲ; ನಾವು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ಆರೋಗ್ಯಕರ ಜೀವನವನ್ನು ಉತ್ತೇಜಿಸಲು ಮತ್ತು ಭೂಮಿಯೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಬದ್ಧವಾಗಿರುವ, ಅಭಿವೃದ್ಧಿ ಹೊಂದುತ್ತಿರುವ ಪರಿಸರದ ಭಾಗವಾಗಿದ್ದೇವೆ. ನಮ್ಮ ಬೇರುಗಳು ಸಾವಯವ ಕೃಷಿಯ ಮಣ್ಣಿನಲ್ಲಿ ಆಳವಾಗಿ ಸಾಗುತ್ತವೆ, ಅಲ್ಲಿ ನಮ್ಮಸರಿಸಮಾನ ಮೌಲ್ಯಗಳ ಬೀಜಗಳನ್ನು ಬಿತ್ತಲಾಗುತ್ತದೆ - ಪ್ರಕೃತಿ, ಸುಸ್ಥಿರತೆ ಮತ್ತು ಸಮುದಾಯಕ್ಕೆ ಗೌರವವನ್ನು ನೀಡಲೋಸುಗ. ಸಣ್ಣ-ಪ್ರಮಾಣದ ಕುಟುಂಬದ ತೋಟಗಳಿಂದ ನಗರ ತೋಟಗಾರಿಕೆ ಉಪಕ್ರಮಗಳವರೆಗೆ, ನಮ್ಮ ಸಮುದಾಯವು ವೈವಿಧ್ಯಮಯ ದೃಶ್ಯಗಳು ಮತ್ತು ಸಂಸ್ಕೃತಿಗಳನ್ನು ಹಬ್ಬಿಸಿದೆ, ಸಾಮಾನ್ಯ ಉದ್ದೇಶದಿಂದ ಒಗ್ಗೂಡಿಸಲ್ಪಟ್ಟಿದೆ: ಎಲ್ಲರಿಗೂ ಉತ್ತಮವಾದ ಸಮಾಜವನ್ನು ಬೆಳೆಸಲು.
ನಮ್ಮ ಸಾಮೂಹಿಕ ಪ್ರಯತ್ನಗಳ ಮೂಲಕ, ನಾವು ಸಾವಯವ ಕೃಷಿಯ ತತ್ವಗಳನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತೇವೆ - ಭೂಮಿಯ ಉಸ್ತುವಾರಿ, ಜೀವವೈವಿಧ್ಯ ಮತ್ತು ಪರಿಸರ ಸಮತೋಲನ. ನಮ್ಮ ಮಾತೃ ಭೂಮಿಯನ್ನು ಬಲ ಪಡಿಸಲು, ದೇಹ ಮತ್ತು ಆತ್ಮಕ್ಕೆ ಪೋಷಣೆಯನ್ನು ಒದಗಿಸಲು ನಮ್ಮ ನಿರಂತರ ಶಕ್ತಿಯನ್ನು ನಾವು ವಿನಿಯೋಗಿಸುತ್ತಿರುತ್ತೇವೆ. ಒಟ್ಟಾಗಿ, ನಾವು ಬದಲಾವಣೆಯ ಪರ್ವವನ್ನು ಸಾರುತ್ತೇವೆ, ಸಾವಯವವು ಕೇವಲ ಲೇಬಲ್ ಅಲ್ಲ, ಆದರೆ ಜೀವನ ವಿಧಾನವಾಗಿರುವ ಭವಿಷ್ಯವನ್ನು ಬೆಳೆಸುತ್ತೇವೆ. ಬನ್ನಿ, ನಮ್ಮೊಂದಿಗೆ ಸೇರಿಕೊಳ್ಳಿ - ಜೊತೆಯಾಗಿ ನಾವು ಇನ್ನೂ ಇದರ ಆಳಕ್ಕೆ ಇಳಿದು, ಬಲವಾಗಿ ಬೆಳೆದು, ನಮ್ಮ ಸಮಾನ ಕನಸುಗಳನ್ನು ನನಸಾಗಿಸೋಣ.
ನೀವು ಸುಸ್ಥಿರ ಕೃಷಿಗಾಗಿ ಉತ್ಸಾಹ ಹೊಂದಿರುವ ರೈತರಾಗಿರಲಿ ಅಥವಾ ಸಾವಯವ ಆಹಾರದ ಒಳ್ಳೆಯತನವನ್ನು ಬಯಸುವ ಗ್ರಾಹಕರಾಗಿರಲಿ, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಆರೋಗ್ಯಕರ, ಸತ್ವಭರಿತ ಆಹಾರವು ಬರೀ ಕೆಲವೇ ಜನರಿಗೆ ಸಿಗುವಂತಹ ಐಷಾರಾಮಿ ಸವಲತ್ತು ಆಗಬಾರದು ಮತ್ತು ಒಂದು ಸುಸ್ಥಿರ, ಸಮೃದ್ಧ ಭೂಮಿಗಾಗಿ ನಾವು ಎಲ್ಲವನ್ನೂ ತ್ಯಾಗ ಮಾಡುವಂತಿರಬಾರದು, ಅಲ್ಲವೇ? ಇಲ್ಲಿ, ನಿಮ್ಮ ಸಾವಯದೆಡೆಗಿನ ಪಯಣವನ್ನು ಸಶಕ್ತಗೊಳಿಸಲು, ಸೂಕ್ತ ಬೆಂಬಲ ಮತ್ತು ಸಂಪನ್ಮೂಲಗಳ ಆಗರವನ್ನು ನೀವು ಇಲ್ಲಿ ಕಾಣುತ್ತೀರಿ.
ನೀವು ಭೂಮಿಗೆ ನಿಮ್ಮ ಎಲ್ಲ ತನು-ಮನ-ಧನ ಗಳನ್ನೂ ಅರ್ಪಿಸುವ ಸಾವಯವ ಕೃಷಿಕರೇ? ನಾವು ನಿಮ್ಮ ಸವಾಲುಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಒಳಿತುಗಳ ಕುರಿತು ಆಲೋಚಿಸುತ್ತೇವೆ. ಸದಸ್ಯರಾಗಿ ಮತ್ತು ಪ್ರಯೋಜನಗಳ ನಿಧಿಯನ್ನು ಅನಾವರಣ ಮಾಡಿ:
ನಿಮ್ಮ ಅಡಿಗೆ ಮನೆಯನ್ನು ತಾಜಾ, ಅತ್ಯಂತ ಆರೋಗ್ಯಕರ ಆಹಾರದಿಂದ ತುಂಬಲು ಬಯಸುವಿರಾ? ನಾವು ಕೊಡುತ್ತೇವೆ:
ನಮ್ಮ ಆಹಾರ ವ್ಯವಸ್ಥೆಯ ಭವಿಷ್ಯವು, ಪರಸ್ಪರ ಸಹಯೋಗದಲ್ಲಿ ಅಡಗಿದೆ. ಆ ಪರಿಹಾರದ ಭಾಗವಾಗಿ:
ಸಾವಯವ ನೈಸರ್ಗಿಕ ಕೃಷಿ ನಮ್ಮ ದೇಶಕ್ಕೆ ಹೊಸ ವಿಚಾರವೇನಲ್ಲ. ಶತಮಾನಗಳಿಂದ ಗೋವು ಆಧಾರಿತ ಕೃಷಿ ನಮ್ಮ ರೈತರ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಗ್ರಾಮೀಣ ಜನರ ಪ್ರತಿ ಕುಟುಂಬದಲ್ಲಿ ದೇಸೀ ಗೋವುಗಳು ಇನ್ನೊಬ್ಬ ಸದಸ್ಯನಿದ್ದಂತೆ. ಅಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಒಂದು ಹಾಲುಕೊಡುವ ದನ ಮತ್ತು ಅದರ ಕರು ಸರ್ವೇ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಇದೇ ಗೊ ಉತ್ಪನ್ನಗಳು ಮೌಲ್ಯ ವರ್ಧನೆಯಿಂದ ಮನೆಯ ಕೃಷಿಗೆ ಗೊಬ್ಬರವಾಗಿ , ಕ್ರಿಮಿ ನಾಶಕವಾಗಿ ಉಪಯೋಗಿಸಲ್ಪಡುತಿದ್ದುವು. ಈ ರೀತಿಯಲ್ಲಿ ಬೆಳೆದ ತರಕಾರಿ ಹಾಗೂ ಹಣ್ಣುಗಳ ತಾಜಾತನ , ಸ್ವಾದ ಬೇರೆಯೇ. ನಮ್ಮ ದೇಶದಲ್ಲಿ ಸಾಧಾರಣ 58 ಪ್ರತಿಶತ ಜನರು ತೊಡಗಿಸಿಕೊಂಡಿರುವ ವಲಯ ಕೃಷಿ. ಇದರಲ್ಲಿ ಕೇವಲ 2 ಪ್ರತಿಶತದಷ್ಟು ರೈತರು ಮಾತ್ರ ಸಾವಯವ ಯಾ ನೈಸರ್ಗಿಕ ಕೃಷಿ ಯನ್ನು ಮಾಡುವವರು. ಒಂದು ಆಶಾದಾಯಕ ವಿಚಾರವೇನೆಂದರೆ ಈ ಸಂಖ್ಯೆ ಕಳೆದ ಒಂದು ದಶಕದಲ್ಲಿ ಸಾಧಾರಣ 150 ಪ್ರತಿಶತದಷ್ಟು ಬೆಳವಣಿಗೆಯಾಗಿದೆ. ಅಂದರೆ ಭಾರತದಲ್ಲಿ ಇಂದು ಸಾಧಾರಣ 50 ಲಕ್ಷದಷ್ಟು ಕೃಷಿಕರು ಸಾವಯವ ರೈತರು. ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಇದನ್ನು ಬೆಂಬಲಿಸುತ್ತಿವೆ , ಪ್ರೋತ್ಸಾಹಿಸುತ್ತಿವೆ. ಸಾವಯವ ಕೃಷಿಕ ಗ್ರಾಹಕ ಬಳಗ ,(ರಿ)ಮಂಗಳೂರು 2013 ರಲ್ಲಿ ಶ್ರಿ ರತ್ನಾಕರ ಕುಳಾಯಿ ಇವರ ಉಪಕ್ರಮದಲ್ಲಿ ಸಮಾನ ಮನಸ್ಕರ ಒಗ್ಗೂಡಿವಿಕೆಯಿಂದ ಸಾವಯವ ಕೃಷಿಕ ಗ್ರಾಹಕರನ್ನು ಒಂದುಗೂಡಿಸುವ ಒಂದು ವೇದಿಕೆಯಾಗಿ ಆರಂಭಗೊಂಡಿತು.
ಇದೀಗ ದಶಕದ ಹೊಸ್ತಿಲು ಯಶಸ್ವಿಯಾಗಿ ದಾಟಿ ಜನಮಾನಸದ ಮನೆ ಮನ ಮುಟ್ಟುವಲ್ಲಿ ಉತ್ತಮ ಸಾಧನೆ ಮಾಡಿದೆ ಎನ್ನಬಹುದು. ಸಾವಯವ ಕೃಷಿಯ ಬಗ್ಗೆ ವಿಶೇಷ ಒಲವು ಇರುವ ಆರಂಭಿಕ ಶ್ರಮ ಇಂದು ನಮ್ಮ ಈ ಬಳಗ ಜಿಲ್ಲೆಯ ಕರಾವಳಿ ಭಾಗದ ಸಾವಯವ ಕೃಷಿಕರಿಗೆ ಒಂದು ಆಶಾದಾಯಕ ಮತ್ತು ಸಮರ್ಥ ಪೋಷಕ ಸಂಸ್ಥೆಯಾಗಿ ರೂಪುಗೊಂಡಿದೆ. ನಮ್ಮ ಬಳಗದ ಹಲವು ಕಾರ್ಯಕ್ರಮಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಸಾವಯವ ರೈತರು ಭಾಗವಹಿಸುತ್ತಿರುವುದು , ನಮ್ಮ ವೇದಿಕೆಯ ಪ್ರಯೋಜನ ಪಡೆದು ಕೊಳ್ಳುತ್ತಿರುವುದು ನಮಗೆ ತುಂಬಾ ಸಂತಸ ಕೊಡುವ ವಿಚಾರ. ಕೃಷಿ ಉತ್ಪನ್ನಗಳ ಕೊಡು ಕೊಳ್ಳುವಿಕೆಯ ಅಂಗಣವಾಗಿದ್ದ ಬಳಗ ಕೆಲವು ಸಂವತ್ಸರಗಳಿಂದ ಸಾವಯವ ಕೃಷಿಯ ಮಾಹಿತಿ ಕಾರ್ಯಗಾರ, ಮನೆ ಮನೆಯಲ್ಲಿ ಕೈತೋಟ ಕ್ರಾಂತಿ, ಆರೋಗ್ಯ ಸಪ್ತಾಹ , ಕೃಷಿ ಮೇಳ , ಹಲಸು ಮೇಳ, ಮನೆ ಮದ್ದು ಶಿಬಿರ , ಬಳಗದ ಸದಸ್ಯರ ತಂಡದಿಂದ ಸಾವಯವ ಕೃಷಿಕರ ಮನೆಗಳಿಗೆ ಅಧ್ಯಯನ ಪ್ರವಾಸ , ಇತ್ಯಾದಿ ಇತ್ಯಾದಿ ಹತ್ತು ಹಲವಾರು ಜನಪಯೋಗಿ ಕೆಲಸಗಳನ್ನು ಮಾಡುತ್ತಿದೆ. ಇದೀಗ ಸಾವಯವ ಕೃಷಿಕರ ಪ್ರಯೋಜನಕ್ಕಾಗಿ ಒಂದು ರೈತ ಉತ್ಪಾದಕ ಸಂಸ್ಥೆಯನ್ನು ಹುಟ್ಟು ಹಾಕಬೇಕೆಂಬ ಯೋಜನೆ ಹಾಕಿಕೊಂಡಿದೆ. ಸಾವಯವ ಉತ್ಪನ್ನ ಬಳಕೆ ಈಗಿನ ಅನಿವಾರ್ಯ. ವಿಷ ಮುಕ್ತ ಬಟ್ಟಲು ಇವತ್ತಿನ ತುರ್ತು ಅವಶ್ಯಕತೆ. ಈ ಹಿನ್ನೆಯಲ್ಲಿ ಜನರ ಆರೋಗ್ಯ ಕಾರಣಕ್ಕಾಗಿ , ರಾಸಾಯನಿಕ ಬಳಕೆಯಿಂದ ಹೊರ ಬಂದು ಮತ್ತೆ ನಮ್ಮ ಭೂಮಿಯನ್ನು ಪುನಃ ಫಲವತ್ತತೆಯಾಗಿ ಉಳಿಸುವ ಹಾಗೂ ಬೆಳೆಸುವ ದೃಷ್ಟಿಯಿಂದ ನಮ್ಮ ಬಳಗ ಬಹಳಷ್ಟು ಕೆಲಸ ಮಾಡುತ್ತಿದೆ. ಇದರಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಎಲ್ಲಾ ಬಂದುಗಳು ವಂದನಾರ್ಹರು.