ನಮ್ಮ ಸುತ್ತಲೂ ಇರುವ ಈ ವಿಷಗಳ ಬಳಕೆ ನಿಲ್ಲಿಸಿ.... ಮುಂದಿನ ಪೀಳಿಗೆ ಉಳಿಸಿ....
ಅಡಿಗೆ ಮನೆಯ ವಿಷಗಳು
1. ಜರ್ಸಿ ದನದ ಹಾಲು
ಜರ್ಸಿ ದನವು ದೇವನಿರ್ಮಿತ ಹಸು ಅಲ್ಲ, ಹಂದಿ ಮತ್ತು ಹಸುಗಳ ಜೀವತಂತುಗಳನ್ನು ಬಳಸಿ ಬಂದ ಹಸು ಬದಲಿ 30 ಲೀಟರ್ ಹಾಲು ಕೊಡುತ್ತದೆ. ಇದಕ್ಕೆ ಕಾರಣ ಅದಕ್ಕೆ ಪ್ರತಿ ತಿಂಗಳು ಕೊಡಿಸುವ ಸ್ಥಿರಾಯ್ ಇಂಜೆಕ್ಷನ್ ಈ ಸ್ಥಿರಾಯ್ಡ್ ಹಾಲಿನಲ್ಲಿ ಹೊರಗೆ ಬರುತ್ತದೆ. ಹೀಗಾಗಿ ಪ್ರತಿನಿತ್ಯ ನಾವು ಸ್ಟಿರಾಯ್ಡ್ ಸೇವಿಸುತ್ತಿದ್ದೇವೆ. ಅದು ಪಿಸಿಓಡಿ ಮತ್ತು ಸಂತಾನಹೀನತೆಯಂತಹ ಸಮಸ್ಯೆಗಳನ್ನು ತರುತ್ತದೆ. ಆದುದರಿಂದ ನಾಟಿ ಹಸು, ಎಮ್ಮೆ, ತೆಂಗು, ರಾಗಿ, ಜೋಳ, ಸಜ್ಜೆ, ಸಿರಿಧಾನ್ಯ ಇವುಗಳ ಹಾಲನ್ನು ಬಳಸಿ
2. ರಿಫೈನೆಡ್ ಎಣ್ಣೆ :
3 ಕಿಲೋ ಕಡಲೆ ಕಾಯಿಯಿಂದ ಒಂದು ಕಿಲೋ ಕಡಲೆ ಕಾಯಿ ಎಣ್ಣೆ ಬರುತ್ತದೆ, ಕಡಲೆ ಕಾಯಿಯ ಬೆಲೆ ಕೆ.ಜಿ.ಗೆ 150/- ಇದ್ದಾಗ ಎಣ್ಣೆಯ ಬೆಲೆಯೂ ಅಷ್ಟೇ ಹೇಗೆ ಸಾಧ್ಯ? ಅದು ಕಲಬೆರಕೆಯಿಂದ ಮಾತ್ರ ಸಾಧ್ಯ ಈ ಕಲಬೆರಕೆ ಮಾಡುವೆ ಎಣ್ಣೆಯನ್ನು ಮಿನರಲ್ ಆಯಿಲ್ ಎಂದು ಕರೆಯುತ್ತಾರೆ. ಇದು ಪೆಟ್ರೋಲ್ ಮೂಲದ್ದು, ರಿಫೈನ್ಸ್ ಆಯಿಲ್ ಆಡುಗೆ ಎಣ್ಣೆ ಅಲ್ಲ! ರಿಫೈನ್ಸ್ ಆಯಿಲ್ ಬಳಸಿದಾಗ ಬೊಜ್ಜು, ಹೃದಯದ ಕಾಯಿಲೆಗಳು, ಸಕ್ಕರೆ ಕಾಯಿಲೆ, ಸಂತಾನ ಹೀನತೆ, ಕ್ಯಾನ್ಸರ್, ಮುಂತಾದ ಕಾಯಿಲೆಗಳು ಬರುತ್ತವೆ. ಅದರ ಬದಲು ಗಾಣದ ಎಣ್ಣೆ ಬಳಸಿ. ಆರೋಗ್ಯ ಉಳಿಸಿಕೊಳ್ಳಿ.
3. ಸಕ್ಕರೆ:
ಕಪ್ಪು ಬೆಲ್ಲದಿಂದ ಸಕ್ಕರೆ ಮಾಡಲು 30ಕ್ಕೂ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಾರೆ. ಈ ರಾಸಾಯನಿಕಗಳು ಹೆಚ್ಚು ಕಡಿಮೆ ಸಕ್ಕರೆಯಲ್ಲಿಯೇ ಉಳಿಯುತ್ತವೆ. ಹೀಗಾಗಿ ಅವುಗಳು ಸಕ್ಕರೆಯೊಂದಿಗೆ ನಮ್ಮ ದೇಹ ಸೇರುತ್ತದೆ. ಅವು ಮೆದುಳಿನ ಕಾಯಿಲೆಗಳು, ಸಕ್ಕರೆ ಕಾಯಿಲೆ, ಸಂತಾನ ಹೀನತೆ, ಮುಂತಾದುವನ್ನು ತರುತ್ತವೆ. ಕಾರಣ ಸಕ್ಕರೆ ಬಳಕೆ ನಿಲ್ಲಿಸಿ. ಕಪ್ಪು ಬೆಲ್ಲ ಬಳಸಿ.
4. ಫ್ರೀ ಫ್ಲೋಯಿಂಗ್ ಸಾಲ್ಟ್:
ಇದರಲ್ಲಿರುವ ಆಂಟಿ ಕೇಕಿಂಗ್ ಏಜೆಂಟ್ಸ್ ಗಳು ಗುದನಾಳದ ಕ್ಯಾನ್ಸರ್ ತರುತ್ತವೆ. ನಮಗಿನ್ನೂ ಈ ಕ್ಯಾನ್ಸರ್ ಬಂದಿಲ್ಲ, ಏಕೆಂದರೆ ಚಿಕ್ಕಂದಿನಿಂದ ನಾವು ಈ ಉಪ್ಪನ್ನು ಬಳಸಿಲ್ಲ. ಆದರೆ ನಮ್ಮ ಮಕ್ಕಳಿಗೆ ನಾವು ಚಿಕ್ಕ ವಯಸ್ಸಿನಿಂದಲೇ ಈ ಉಪ್ಪನ್ನು ತಿನಿಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಈ ಕ್ಯಾನ್ಸರ್ ಬಂದಾಗ ನಾವಿರುವುದಿಲ್ಲ. ಆದರೆ ಕಾರಣ ನಾವಾಗಿರುತ್ತೇವೆ. ಶ್ರೀ ಫ್ಲೋಯಿಂಗ್ ಸಾಲ್ಟ್ ಬಳಕೆ ನಿಲ್ಲಿಸಿ. ಗಟ್ಟಿ ಉಪ್ಪು ತೆಗೆದುಕೊಂಡು ಬಂದು ಮನೆಯಲ್ಲಿ ನೀವೇ ಪುಡಿ ಮಾಡಿಕೊಳ್ಳಿ.
5. ಮೈದಾ:
ಗೋಧಿಹಿಟ್ಟಿಗೆ ಅಲಾಕ್ಸನ್ ಎಂಬ ರಾಸಾಯನಿಕ ಬೆರೆತಾಗ ಅದು ಬಿಳಿ ಮೈದಾ ಆಗುತ್ತದೆ. ಈ ಅಲಾಕ್ಷನನ್ನು ಪ್ರಯೋಗ ಶಾಲೆಗಳಲ್ಲಿ ಇಲಿಗಳಿಗೆ ಸಕ್ಕರೆ ಕಾಯಿಲೆ ಬರುವಂತೆ ಮಾಡಲು ಬಳಸಲಾಗುತ್ತಿದೆ. ಅಂದರೆ ಪ್ರತಿದಿನ ಮೈದಾ ಅಂದರೆ ಬೇಕರಿ ಆಹಾರಗಳನ್ನು ನಮ್ಮ ಮಕ್ಕಳಿಗೆ ತಿನಿಸುವುದರಿಂದ ಅವರ ಮೆದೋಜೀರಕ ಗ್ರಂಥಿ ಹಾಳಾಗಿ ಅವರಿಗೂ ಸಕ್ಕರೆ ಕಾಯಿಲೆ ಗ್ಯಾರಂಟಿ ಆಗುತ್ತದೆ. ಮೈದಾ ಬಳಸಬೇಡಿ, ಬೇಕರಿ ಕಿಂಡಿ ಬೇಡವೇ ಬೇಡ. ಮನೆ ತಿಂಡಿ ತಿನಿಸಿ, ಗೋಧಿ ಹಿಟ್ಟಿನಿಂದ ಅಡುಗೆ ಮಾಡಿ.
6. ಪ್ಲಾಸ್ಟಿಕ್:
ಅಡುಗೆ ಮನೆಯಲ್ಲಿ ಬೇಳೆ ಕಾಳುಗಳನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಳಸಬೇಡಿ. ಪ್ಲಾಸ್ಟಿಕ್ ತಟ್ಟೆ ಲೋಟ, ನಾನ್ ಸ್ಟಿಕ್ ಪಾತ್ರೆಗಳು, ಇತ್ಯಾದಿ ಬಳಸಬೇಡಿ. ಪ್ಲಾಸ್ಟಿಕ್ ನಲ್ಲಿರುವ ಹಾಲು, ಅಡುಗೆ ಎಣ್ಣೆ, ಮುಂತಾದ ಪದಾರ್ಥಗಳನ್ನು ಕೊಳ್ಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ, ಪ್ಲಾಸ್ಟಿಕ್ ನ ಬಳಕೆಯಿಂದ ಕ್ಯಾನ್ಸರ್, ಸಂತಾನ ಹೀನತೆ, ಹೃದಯದ ಕಾಯಿಲೆಗಳು, ಅಲ್ವರ್, ಥೈರಾಯಿಡ್, ಸಕ್ಕರೆ ಕಾಯಿಲೆ, ಬೊಜ್ಜು, ನರ ರೋಗಗಳು, ಮುಂತಾದ ಕಾಯಿಲೆಗಳು ಬರುತ್ತವೆ. ಪ್ಲಾಸ್ಟಿಕ್ ತ್ಯಜಿಸಿ, ಜೀವ ಉಳಿಸಿ.
7. ಕೀಟ ನಾಶಕ ಬಳಸಿ ಬೆಳೆದ ತರಕಾರಿ, ಹಣ್ಣು, ದಿನಸಿ ವಸ್ತುಗಳು:
ಕೀಟನಾಶಕಗಳ ಬಳಕೆಯಿಂದ ಬೆಳೆದ ಆಹಾರಗಳನ್ನು ಸೇವಿಸುವುದರಿಂದ ಕ್ಯಾನ್ಸರ್, ಸಂತಾನ ಹೀನತೆ, ಮೆದುಳಿನ ಕಾಯಿಲೆಗಳು, ಊನ ಮಗುವಿನ ಜನನ, ನರ ರೋಗಗಳು, ಮೆದುಳಿನ ರೋಗಗಳು, ಮುಂತಾದ ತೊಂದರೆಗಳು ಉಂಟಾಗುತ್ತವೆ. ಸಾವಯವ
ಆಹಾರ ಬಳಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.
8. ಕಾರ್ಬೈಡ್ ಬಳಸಿ ಹಣ್ಣು ಮಾಡಿದ ಹಣ್ಣುಗಳು:
ಬಾಳೆಹಣ್ಣು, ಮಾವಿನ ಹಣ್ಣು, ಟೊಮೆಟೊ. ಗೋಡಂಬಿ, ಕೆಲವೊಮ್ಮೆ ಚಿಕ್ಕು, ಮುಂತಾದುವನ್ನು ಕಾಯಿ ಇರುವಾಗಲೇ ಸಂಗ್ರಹಿಸಿ ಕಾರ್ಬೈಡ್ ಎಂಬ ರಾಸಾಯನಿಕ ಬಳಸಿ ಹಣ್ಣು ಮಾಡಲಾಗುತ್ತದೆ. ಈ ಹಣ್ಣುಗಳನ್ನು ಸೇವಿಸಿದಾಗ ಮೆದುಳಿನ ಕಾಯಿಲೆಗಳು ಮತ್ತು ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಗಿಡದಲ್ಲಿಯೇ ಹಣ್ಣಾದ ಹಣ್ಣುಗಳನ್ನು ಕೊಳ್ಳಿ ಅಥವಾ ನೈಸರ್ಗಿಕ ರೀತಿಯಲ್ಲಿ ಹಣ್ಣು ಮಾಡಿದ ಹಣ್ಣುಗಳನ್ನು ಕೊಳ್ಳಿ, ಈ ತರದ ಹಣ್ಣುಗಳನ್ನು ಕೊಳ್ಳಲು ಸಾವಯವ ರೈತರ ಸಂಪರ್ಕ ಯಾವಾಗಲೂ ಇರಲಿ.
9. ಪಾತ್ರೆ ತೊಳೆಯಲು ಸೋಪು ಬಳಕೆ:
ಸೋಪಿನಲ್ಲಿರುವ ವಿಷ ರಾಸಾಯನಿಕಗಳು ಆಹಾರದೊಂದಿಗೆ ದೇಹ ಸೇರಿ ಜೀರ್ಣಶಕ್ತಿಯನ್ನು ಕುಗ್ಗಿಸುತ್ತವೆ. ಕಾರಣ ರಾತ್ರೆ ತೊಳೆಯಲು ಮಣ್ಣು, ಬೂದಿ, ಅಂಟ್ವಾಳಪುಡಿ, ಸೀಗೆಪುಡಿ ಈ ನೈಸರ್ಗಿಕ ವಸ್ತುಗಳನ್ನು ಬಳಸಿ.
10. ಕಾಫಿ ಟೀ:
ಕಾಫಿ ಟೀ ಗಳ ಅತಿ ಸೇವನೆ ದೇಹದಲ್ಲಿ ನೀರನ್ನು ಹೊರ ಹಾಕುತ್ತದೆ. ಹೀಗಾಗಿ ಹೃದಯದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಕಾರಣ ಟೀ ಕಾಫಿ ಬಳಕೆ ನಿಲ್ಲಿಸಿ. ಕಷಾಯ ಬಳಸಿ.
ಡಯಾಬಿಟಿಕ್‌ಗೆ ಕಾರಣವಾದ ಆಹಾರ ರೂಪದಲ್ಲಿರುವ ವಿಷಗಳು : ಹೈಬ್ರಿಡ್, ಗೋಧಿ, ಪಾಲಿಷ್ ಬಿಳಿ ಅಕ್ಕಿ, ಮೈದಾ, ಬಿಳಿ ಸಕ್ಕರೆ, ರಿಫೈನಡ್ ಎಣ್ಣೆ ಮತ್ತು ಹೈಬ್ರಿಡ್ ಹಸುವಿನ ಹಾಲು.
ಸಾವಯವ ಕೃಷಿಕ ಗ್ರಾಹಕ ಬಳಗ, ತಿನ್ನುವ ಆಹಾರದ ಜಾಗೃತಿ, ವಿಷಮುಕ್ತ ಅನ್ನದ ಬಟ್ಟಲನ್ನು ಪ್ರತಿಯೊಬ್ಬರು ಅಳವಡಿಸಬೇಕೆಂಬ ಉದ್ದೇಶದಿಂದ ಇದರ ವ್ಯಾಪ್ತಿಯಲ್ಲಿ ಹತ್ತು ಹಲವಾರು ಚಟುವಟಿಕೆಯನ್ನು ನಿರಂತರ ನಡೆಸುತ್ತಾ ಬರುತ್ತಿದೆ.
© 2024 Savayava Balaga. All rights reserved | Designed by Accolade Tech Solutions Private Limited