ಹಲಸು ಹಬ್ಬ (7 ನೇ ವರ್ಷ), ಮೇ 18 ಮತ್ತು 19, 2024
18 May 2024
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ ನಗರದ ಶ್ರೀ ಶರವು ದೇವಸ್ಥಾನದ ಸಮೀಪದ ಬಾಳಂಭಟ್ ಸಭಾಂಗಣದಲ್ಲಿ ಎರಡು ದಿನಗಳ (May 18th & 19th) ಹಲಸಿನ ಹಬ್ಬ ಬಹಳ ವಿಜೃಂಭಣೆಯಿಂದ ನಡೆಯಿತು.
ಹಲಸಿನ ಹಣ್ಣು ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನಗಳ ಪ್ರಿಯರು ಖರೀದಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕೆಂಪು ರುದ್ರಾಕ್ಷಿ ಹಲಸು, ದೊಡ್ಡಬಳ್ಳಾಪುರದ ತೂಬಗೆರೆ ಹಲಸು, ಚಂದ್ರ ಹಲಸು, ಬಂಗಾರ ಬಣ್ಣದ ಹಲಸು, ಸ್ಥಳೀಯವಾಗಿ ಬೆಳೆಯುವ ಬರ್ಕೆ, ಹಲಸಿನಿಂದ ತಯಾರಿಸಿದ ಬೆಲ್ಲದ ಹಲ್ವ, ಐಸ್‌ಕ್ರೀಂ, ಉಂಡ್ಲುಕ, ಚಿಪ್ಸ್, ಸಾಂತನಿ, ಪೇಡ, ಮಾಂಬಳ, ಉಪ್ಪು ಸೊಳೆ, ಒಣಸೊಳೆ, ಜೂಸ್, ಸ್ಮಾಶ್, ಹೋಳಿಗೆ, ಹಲಸಿನ ಹಣ್ಣಿ ನಿಂದಲೇ ತಯಾರಿಸಿದ ಪೂರಿಯ ಜತೆಗೆ ಅದರದೇ ಪಲ್ಯ, ಹಲಸಿನ ವಡಾಪಾವ್, ಹಲಸಿನ ಮಂಚೂರಿ, ಕಬಾಬ್, ಪಲಾವ್, ಜಾಮೂನ್, ಗಾರಿಗೆ, ಪತ್ತೊಡೆ, ಅಂಬಡೆ ಎಲ್ಲವೂ ಗ್ರಾಹಕರ ಗಮನ ಸೆಳೆಯಿತು.
ಹಲಸಿನ ಹಬ್ಬ ನಡೆಯುವ ಸಭಾಂಗಣದ ಹೊರ ಆವರಣದಲ್ಲಿ ಹಲಸು ಸೇರಿದಂತೆ ಬಗೆ ಬಗೆಯ ಹಣ್ಣು ಹಂಪಲುಗಳ ಗಿಡಗಳ ಮಾರಾಟವೂ ನಡೆಯಿತು.