Programs/Events

ಸಾವಯವ ಪ್ರವಾಸ: ಚೈತನ್ಯ ವಿದ್ಯಾಲಯ ಪೈಚಾಲ್, ಕಾಸರಗೋಡು

ಸಾವಯವ ಪ್ರವಾಸ: ಚೈತನ್ಯ ವಿದ್ಯಾಲಯ ಪೈಚಾಲ್, ಕಾಸರಗೋಡು

05 November 2025

"ಋಷಿಕ್ಷೇತ್ರದಲ್ಲಿ ಕೈತೋಟ ಕ್ರಾಂತಿ - 5/11/25

# ಕೈತೋಟ ಕ್ರಾಂತಿ: ಚೈತನ್ಯ ವಿದ್ಯಾಲಯ, ಋಷಿಕ್ಷೇತ್ರ, ಕೂಡ್ಲು, ಕಾಸರಗೋಡು ಮತ್ತು ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಮಂಗಳೂರು ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮ.

# ದಿನಾಂಕ 5/11/25, ಬುಧವಾರದಂದು ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ.

# ಸಾವಯವ ಬಳಗದ ಅಧ್ಯಕ್ಷರಾದ ಶ್ರೀ ಜಿ. ಆರ್. ಪ್ರಸಾದರ ನೇತೃತ್ವದಲ್ಲಿ 30 ಜನ ಸದಸ್ಯರ ತಂಡದಿಂದ ಚೈತನ್ಯ ವಿದ್ಯಾಲಯಕ್ಕೆ ಭೇಟಿ.

# ಶಾಲೆಯಲ್ಲಿ ನಡೆಯುವ ಬೆಳಗ್ಗಿನ ಪ್ರಾರ್ಥನಾ ಸಭೆ, ಶಿಶುಮಂದಿರದ ಪಠ್ಯೇತರ ಚಟುವಟಿಕೆಗಳು ಶಿಸ್ತುಬದ್ಧವಾಗಿದ್ದುವು.

# ಶ್ರೀ ಜಿ.ಆರ್.ಪ್ರಸಾದರು ವಿದ್ಯಾರ್ಥಿಗಳಿಗೆ ನಮ್ಮ ಬಳಗದ ಪರಿಚಯ ಮಾಡುತ್ತಾ ಆರೋಗ್ಯಕರ ಜೀವನಕ್ಕೆ ವಿಷಮುಕ್ತ ನೀರು - ಗಾಳಿ - ಆಹಾರದ ಅಗತ್ಯತೆ, ಉತ್ತಮ ಆಹಾರ ಸೇವನೆ, ಕೈತೋಟದ ಬಗ್ಗೆ ತಿಳಿಸಿಕೊಟ್ಟರು.

# ವಿದ್ಯಾರ್ಥಿಗಳ ಮತ್ತು ಮಾತಾಜಿಗಳ ನಡೆನುಡಿಗಳು, ಶಾಲಾ ಪರಿಸರ ಮತ್ತು ಏರ್ಪಾಡುಗಳು ಎಲ್ಲವೂ ಅತ್ಯುತ್ತಮ.

# ಪ್ರಸಿದ್ಧ ಮಧೂರು ಕ್ಷೇತ್ರಕ್ಕೆ ಭೇಟಿ.

# ವಿದ್ಯಾಲಯದ ಕಾರ್ಯನಿರ್ವಾಹಕರಾದ ಶ್ರೀ ರಮೇಶ್, ವ್ಯವಸ್ಥಾಪಕರಾದ ಶ್ರೀ ನಾಗೇಶ್, ಬಳಗದ ಕಾರ್ಯದರ್ಶಿ ಶ್ರೀ ರತ್ನಾಕರ ಕುಳಾಯಿ; ಶ್ರೀಮತಿಯರಾದ ಸರೋಜಾ ಪ್ರಕಾಶ, ಸ್ನೇಹಾ ರವೀಶ್, ಪುಷ್ಪಲತಾ (ಪ್ರಾಂಶುಪಾಲೆ) ಮತ್ತು ರೂಪಾ (ಶಿಶುಮಂದಿರದ ಮುಖ್ಯಸ್ಥೆ) ಉಪಸ್ಥಿತಿಯಲ್ಲಿ ಕೈತೋಟ ಕ್ರಾಂತಿ ಕಾರ್ಯಕ್ರಮ.

# ಪ್ರಾರ್ಥನೆ, ಸ್ವಾಗತ, ಅಧ್ಯಕ್ಷೀಯ ಭಾಷಣದ ನಂತರ ಬಳಗದ ಕಾರ್ಯದರ್ಶಿ ಶ್ರೀ ರತ್ನಾಕರ ಕುಳಾಯಿಯವರಿಂದ ಸಾವಯವ ಕೃಷಿಯ ಅವಶ್ಯಕತೆ, ಆಹಾರ ಮತ್ತು ಆರೋಗ್ಯದ ಕುರಿತು ಮಾಹಿತಿ.

# ಶ್ರೀಮತಿ ಸರೋಜಾ ಪ್ರಕಾಶರು 'ಕೈತೋಟ ಕ್ರಾಂತಿಯಾಗಲಿ’ ಎನ್ನುತ್ತಾ ನಮ್ಮ ಮನೆಗಳಲ್ಲಿ ಸೊಪ್ಪು - ತರಕಾರಿಗಳನ್ನು ಸಾವಯವ ರೀತಿಯಲ್ಲಿ ಬೆಳೆಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

# ಅಲಂಕಾರಿಕಾ ಗಿಡಗಳನ್ನು ಬೆಳೆಸುವ ಕುರಿತು ಸಮಗ್ರ ಮಾಹಿತಿಯನ್ನು ಶ್ರೀಮತಿ ಸ್ನೇಹಾ ರವೀಶ್ ಅವರು ತಿಳಿಸಿಕೊಟ್ಟರು.

# ಬಳಗದ ವತಿಯಿಂದ ವಿದ್ಯಾಲಯಕ್ಕೆ 10 ಹಣ್ಣಿನ ಗಿಡಗಳು ಮತ್ತು 1000 ಪೌಷ್ಟಿಕ ಉಂಡೆಗಳನ್ನು ನೀಡಲಾಯಿತು. ಗಿಡ ನೆಡುವ ಕಾರ್ಯಕ್ರಮವನ್ನೂ ಆಚರಿಸಲಾಯಿತು.

# ಈ ಯಶಸ್ವೀ ಕಾರ್ಯಕ್ರಮದ ಆಯೋಜನೆಯಲ್ಲಿ ಬಳಗದ ಸದಸ್ಯರಾದ ಶ್ರೀಮತಿ ಜಯಶ್ರೀ ಮತ್ತು ಶ್ರೀ ದಯಾನಂದ್ ಹಾಗೂ ಅವರ ಒಡಹುಟ್ಟಿದವರ ಸಹಕಾರ ಮತ್ತು ಬೆಂಬಲವನ್ನು ಸ್ಮರಿಸಲೇಬೇಕು.

# ‘ಕೈತೋಟ ಕ್ರಾಂತಿ' ಹಾಗೂ 'ಕರ್ನಾಟಕ ಮತ್ತು ಕಾಸರಗೋಡು ಸಾವಯವ ಸೇತುಬಂಧ' - ಈ ಎರಡೂ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿ ಹಿಂತಿರುಗಿ ಬರುವಾಗ ಎಲ್ಲರ ಮನಸ್ಸು ಸಂತೃಪ್ತಿಯಿಂದ ತುಂಬಿದ್ದರೆ ಕೈಯಲ್ಲಿ ಸ್ವಯಂ ತರಕಾರಿ ಬೆಳೆಸಲು ಬೀಜಗಳು ಮತ್ತು ಗಿಡಗಳಿದ್ದವು.

"