Programs/Events

ಅಡವಿಯ ಹಾಡಿಯಲ್ಲಿ ದಿನಗಳೆರಡರ ಜೀವನ ಪಾಠ

ಅಡವಿಯ ಹಾಡಿಯಲ್ಲಿ ದಿನಗಳೆರಡರ ಜೀವನ ಪಾಠ

13 February 2026

ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಮಂಗಳೂರು

ಸಾವಯವ ಕೃಷಿಕ ಗ್ರಾಹಕ ಬಳಗ ತನ್ನ ಕ್ರಿಯಾಶೀಲ ಸದಸ್ಯರಿಗೋಸ್ಕರ ಆಯೋಜಿಸಿರುವ ಮುಂದಿನ ಅಧ್ಯಯನ ಪ್ರವಾಸ ‘ಅಡವಿಯ ಹಾಡಿಯಲ್ಲಿ ದಿನಗಳೆರಡರ ಜೀವನದ ಪಾಠ.’

ಕರ್ನಾಟಕ ರಾಜ್ಯದ ‘ಪ್ರಥಮ ಸಾವಯವ ತಾಲೂಕು’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾಕ್ಕೆ ಭೇಟಿ ನೀಡಿ ಅಲ್ಲಿಯ ಕುಡುಬಿ ಜನಾಂಗದ ಜನರ ಮತ್ತು ವಿಶೇಷವಾಗಿ ಶಾಲಾ ಮಕ್ಕಳ ಜೊತೆ ಬೆರೆತು ಅವರ ಜೀವನಶೈಲಿಯನ್ನು ಅನುಭವಿಸಿ ಅಧ್ಯಯನ ಮಾಡುವ ಸದವಕಾಶ ಇದು. ಖ್ಯಾತ ಪರಿಸರ ಪ್ರೇಮಿ ಶ್ರೀ ದಿನೇಶ ಹೊಳ್ಳರ ಮಾರ್ಗದರ್ಶನದಲ್ಲಿ ಫೆಬ್ರವರಿ ತಿಂಗಳ 13, 14 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಳಗದ ಸದಸ್ಯರು ಉತ್ಸುಕರಾಗಿದ್ದಾರೆ.

ಅಲ್ಲಿ ಅಂದಾಜು 70 ಮಂದಿ ಶಾಲಾ ವಿದ್ಯಾರ್ಥಿಗಳ ಜೊತೆ ನಮ್ಮ ತಂಡ ಒಡನಾಡಲಿದೆ. ಕಡಿದಾದ ಅರಣ್ಯ ಪ್ರದೇಶದಲ್ಲಿ ಕಷ್ಟಪಟ್ಟರೂ ಇಷ್ಟವಿರುವ ವಿದ್ಯೆಯನ್ನು ಕಲಿಯಲು ಶ್ರಮಿಸುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಆ ಮಕ್ಕಳಿಗೆ ಏನಾದರೂ ನೆನಪು ಕಾಣಿಕೆಗಳನ್ನು ನೀಡಲು ಇಚ್ಚಿಸುವ ಸಹೃದಯಿಗಳು (ಉದಾಹರಣೆಗೆ: ಕಲಿಯುವಿಕೆಗೆ ಅಗತ್ಯವಿರುವ ಲೇಖನ ಸಾಮಗ್ರಿಗಳು, ಪುಸ್ತಕಗಳು, ತಿಂಡಿ ತಿನಿಸುಗಳು, ಬುತ್ತಿ ಪಾತ್ರೆಗಳು ಇತ್ಯಾದಿ) ಅವುಗಳನ್ನು ಫೆಬ್ರವರಿ 12 ನೇ ತಾರೀಕು ಮಧ್ಯಾಹ್ನ 12 ಗಂಟೆಯ ಒಳಗೆ ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆಯಲ್ಲಿರುವ ಸಾಹಿತ್ಯ ಕೇಂದ್ರಕ್ಕೆ ತಲುಪಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.

ಬುಡಕಟ್ಟು ಜನಾಂಗದ ಮಕ್ಕಳ ಉನ್ನತಿಗೆ ನೆರವಾಗುವ ಪುಣ್ಯಕಾರ್ಯದಲ್ಲಿ ಭಾಗಿಯಾಗೋಣ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಮೊ.ಸಂ. 9480682923