ವ್ಯಸ್ತ ಜೀವನ ಸ್ವಸ್ಥ ಭೋಜನ
29 November 2025
"ವ್ಯಸ್ತ ಜೀವನ ಸ್ವಸ್ಥ ಭೋಜನ”
ನಮ್ಮ ಆಹಾರ - ನಮ್ಮ ಆರೋಗ್ಯ
ಪೌಷ್ಟಿಕ ಆಹಾರ ತಯಾರಿಕಾ ಕಾರ್ಯಾಗಾರ
ಸಹೃದಯರೇ,
ಇಂದಿನ ವ್ಯಸ್ಥ ಜೀವನ ಶೈಲಿಯಲ್ಲಿ ನಮ್ಮ ನಿತ್ಯದ ಆಹಾರಕ್ರಮ ಅಸ್ತವ್ಯಸ್ತವಾಗಿರುವುದು ಕಳವಳಕಾರಿ ವಿಚಾರ.
ನಗರಗಳಲ್ಲಿ ತ್ವರಿತ ಆಹಾರ, ಮನೆಬಾಗಿಲಿಗೇ ಕ್ಷಿಪ್ರವಾಗಿ ತಲುಪುವ ಸಿದ್ಧ ಅಡುಗೆ, ಪೌಷ್ಟಿಕತೆಯ ಬಗ್ಗೆ ಗಮನ ಹರಿಸದೆ, ಹಿರಿಯರ ಮಾರ್ಗದರ್ಶನಕ್ಕೆ ಕಿವಿಗೊಡದೆ ಗಡಿಬಿಡಿಯಲ್ಲಿ ಸಿಕ್ಕಿದ್ದನ್ನು ಮಾಡುವ - ತಿನ್ನುವ ಕಾಲದಲ್ಲಿ ಪೊಟ್ಟಣದಲ್ಲಿ ಸಿಗುವ ಸಂಸ್ಕರಿಸಿದ ಸಿದ್ಧ ಆಹಾರದ ಸೇವನೆ ಗಣನೀಯವಾಗಿ ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಬಾಯಿಗೆ ರುಚಿ ಎನಿಸಿದರೂ ಆರೋಗ್ಯಕ್ಕೆ ಹಾನಿಕರ. ಸರಿಯಿಲ್ಲದ ಆಹಾರ ಪದ್ಧತಿಯಿಂದಾಗಿ ಚಿಕ್ಕ ಮಕ್ಕಳು, ಯುವಜನರು ಇಂದು ನಾನಾ ಖಾಯಿಲೆಗಳಿಗೆ ತುತ್ತಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ನಾವು ಮತ್ತು ನಮ್ಮ ಮುಂದಿನ ಜನಾಂಗ ಆಹಾರದ ಮೂಲಕ ಅನಾರೋಗ್ಯದ ಕಡೆಗೆ ಹೋಗಬಾರದು ಎನ್ನುವ ಸದುದ್ದೇಶದಿಂದ ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಮಂಗಳೂರು, 'ವ್ಯಸ್ತ ಜೀವನ ಸ್ವಸ್ಥ ಭೋಜನ' ಎಂಬ ಶೀರ್ಷಿಕೆಯಡಿ ಆರೋಗ್ಯಕರ ಆಹಾರ ತಯಾರಿಕಾ ಕಾರ್ಯಾಗಾರಗಳನ್ನು ಆಯೋಜಿಸುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ನಾವು ದಿನನಿತ್ಯ ಸೇವಿಸುವ ಆಹಾರವನ್ನು ಪೌಷ್ಟಿಕವಾಗಿ, ರುಚಿಯಾಗಿ ಮತ್ತು ಸುಲಭ ರೀತಿಯಲ್ಲಿ ನಮ್ಮ ನಮ್ಮ ಮನೆಗಳಲ್ಲೇ ಕಡಿಮೆ ಸಮಯದಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ಜನರಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವ ಪ್ರಯತ್ನ ನಮ್ಮದು.
ಉದಾಹರಣೆಗೆ ಆರೋಗ್ಯಕರ ತಂಬ್ಳಿಗಳು, ರುಚಿಕರ ಉಂಡೆಗಳು ಮತ್ತು ಪೌಷ್ಟಿಕ ಲಘು ಆಹಾರಗಳು (ವಿಶೇಷವಾಗಿ ಶಾಲಾ ಬುತ್ತಿಗೆ ಮತ್ತು ಸಂಜೆಯ ತಿಂಡಿಗೆ)
ಇಂತಹ ಕಾರ್ಯಕ್ರಮವೊಂದನ್ನು ನಿಮ್ಮಲ್ಲಿ ಏರ್ಪಡಿಸಲು ಉತ್ಸುಕರಾಗಿದ್ದೀರಾ?
ಹಾಗಿದ್ದಲ್ಲಿ ಈ ಕೆಳಗಿನ ಸೂಚನೆಗಳು ನಿಮಗಾಗಿ:
# ಈ ಕಾರ್ಯಕ್ರಮ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ಹೆತ್ತವರಿಗಾಗಿ.
# ನಮ್ಮ ಮೊದಲ ಆದ್ಯತೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ (ಮತ್ತು ಅದರ ಹೊರವಲಯಕ್ಕೆ)
# ಸಂಪನ್ಮೂಲ ವ್ಯಕ್ತಿಗಳನ್ನು ನಾವೇ ಉಚಿತವಾಗಿ ಒದಗಿಸಿ ಕೊಡುತ್ತೇವೆ.
# ದಿನಾಂಕ ಮೊದಲೇ ನಿಶ್ಚಯಿಸಬೇಕು.
# ಕನಿಷ್ಟ 20 ಮಂದಿ ಪೋಷಕರು ಇರಬೇಕು.
# ಮಾಹಿತಿ ವಿನಿಮಯ ಆದರೆ 1 ಘಂಟೆ, ಆಹಾರ ತಯಾರಿಕೆಯನ್ನು ಪ್ರಾಯೋಗಿಕವಾಗಿ ತಿಳಿಸಿ ಕೊಡುವುದಿದ್ದಲ್ಲಿ 2 ಘಂಟೆಯ ಸಮಯಾವಕಾಶ ಇರುತ್ತದೆ.
# ಆಹಾರ ತಯಾರಿಸುವುದಿದ್ದಲ್ಲಿ ಕಾರ್ಯಕ್ರಮ ಏರ್ಪಡಿಸುವವರು/ ಸಂಘಟಕರು ಅಗತ್ಯವಿರುವ ಎಲ್ಲಾ ವಸ್ತುಗಳ ಬಗ್ಗೆ ತಿಳಿದುಕೊಂಡು ಬೇಕಾದ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಬೇಕು.
# ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ಮೊ. ಸಂ: 9480682923
“ಸ್ವಸ್ಥ ಸಮಾಜದ ಪರಿಕಲ್ಪನೆಯೊಂದಿಗೆ ಸುಲಭವಾಗಿ ಆರೋಗ್ಯಕರ ಆಹಾರ.”
