Programs/Events

ಸಾಧಕ-ಸಾಧನೆಯ ರೈತರ ಮನೆ- ತೋಟಕ್ಕೆ ಭೇಟಿ

ಸಾಧಕ-ಸಾಧನೆಯ ರೈತರ ಮನೆ- ತೋಟಕ್ಕೆ ಭೇಟಿ

25 August 2024

ಸಾಧಕ-ಸಾಧನೆಯ ರೈತರ ಮನೆ- ತೋಟಕ್ಕೆ ಭೇಟಿ

ಸಮಯ # ಬೆಳಿಗ್ಗೆ 7:30 ಸಾಹಿತ್ಯಕೇಂದ್ರದ ಮುಂಭಾಗದಿಂದ ಹೊರಡುವುದು
ಸಂಜೆ 7:30 ಕ್ಕೆ ವಾಪಾಸ್ಸು ಮಂಗಳೂರು ತಲುಪುವುದು

1) ಶ್ರೀಚಂದ್ರಕಾಂತ್ ರಾವ್, ಇನ್ನ, ಪಡುಬಿದ್ರೆ

EP-1,ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ NITK ಸುರತ್ಕಲ್ ನಿಂದ ಪ್ರತಮ ರ್ರ್ಯಾಂಕ್ ಪಡೆದು, ಸುದೀರ್ಘ ಕಾರ್ಪೊರೇಟ್ ಜೀವನದ ಉನ್ನತ ಹುದ್ದೆಯಿಂದ ಹುಟ್ಟೂರಿನ ಗ್ರಾಮದಲ್ಲಿ ಸುತ್ತಲಿನ ಜನ ತಿರುಗಿ ನೋಡುವಂತೆ ಅತ್ಯದ್ಭುತವಾಗಿ ವಿದೇಶಿ ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಹಣ್ಣುಗಳ ಜೊತೆ ದೇಸಿ ವಿವಿಧ ಬೆಳೆಗಳ ವಿನೂತನ ಪ್ರಯೋಗ ಮಾಡಿ, ಸೀಬೆ ಮೌಲ್ಯವರ್ಧನೆ ಮಾಡಿ, ಕೃಷಿ ಜೊತೆಗೆ ಊರಿನ ಮಕ್ಕಳಿಗೆ ತಮ್ಮ ಸಂಸ್ಥೆ ಮುಖೇನ ಶಿಕ್ಷಣ ನೀಡುತ್ತಾ..!! ಸೈ ಎನಿಸಿಕೊಂಡಿರುವ ನಮ್ಮ ಉಡುಪಿಯ ಪ್ರಯೋಗಶೀಲ ರೈತ, ಉದ್ಯಮಿ, ಶಿಕ್ಷಕ ಶ್ರೀ ಚಂದ್ರಕಾಂತ್ ರಾವ್ ರವರ ತೋಟ ಪರಿಚಯ.

ಇವರ ತೋಟ ಒಂದು ಮಿನಿ ಮಿಶ್ರ ಬೆಳೆಗಳ ಕಾಡು ಅನ್ನೋದ್ರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ,

2) ವೆಂಕಟೇಶ ಮೈಯ

ಶೃಂಗ ಶ್ಯಾಮಲ ,ಬಾರಾಡಿ ಅತ್ಯಂತ ಉತ್ಸಾಹೀ ಕೃಷಿಕರು,ವಿವಿಧ ಮಜಲುಗಳಲ್ಲಿ ಹಲವಾರು ಕೃಷಿ ಪ್ರಯೋಗ ಶೀಲ ವ್ಯಕ್ತಿತ್ವ ಹೊಂದಿದವರು

3) ನಾಗರಾಜ ಶೆಟ್ಟಿ ಅಂಬೂರಿ,ಬೆಳ್ವಾಯಿ

ಪ್ರಗತಿಪರ ಯುವ ಕೃಷಿಕ ಭತ್ತ, ಹೈನುಗಾರಿಕೆ ಅಡಿಕೆ, ಜೇನು, ಕೋಳಿ, ಮೀನು, ಹಣ್ಣು ಹಂಪಲಿನ ವಿವಿಧ ಕೃಷಿ ಸಾಧಕ.

ಈ ಮೇಲಿನ ಪ್ರವಾಸದ ಆಸಕ್ತರು ಕಡ್ಡಾಯವಾಗಿ 20/8/24 ಮಂಗಳವಾರ ಮುಂಚಿತ ತಮ್ಮ ಹೆಸರು ಮತ್ತು ಪ್ರವಾಸದ ಹಣ ₹500 ಕೊಟ್ಟು ಸಾಹಿತ್ಯಕೇಂದ್ರದಲ್ಲಿ ನೊಂದಾಯಿಸಬೇಕು. 40 ಜನರಿಗೆ ಸೀಮಿತ, ಬಸ್ ಮಾಡುವುದರಿಂದ ನಂತರ ಬರುವ ಹೆಸರನ್ನು ನೊಂದಾವಣೆ ಮಾಡುವುದಿಲ್ಲ.

ಸ್ವತಹ ವಾಹನದಲ್ಲಿ ಬರುವವರಿಗೆ ಅವಕಾಶ ಇಲ್ಲ.

ಬೆಳಗಿನ ಉಪಾಹಾರ ವ್ಯವಸ್ಥೆ ವಯೂಕ್ತಿಕ/ಸಾಮೂಹಿಕ (ಹೋಟೇಲ್)
ಮಧ್ಯಾನಃ ಭೋಜನ: ಇನ್ನ ಮುದಣ ದೇವಸ್ಥಾನ ಮಳೆ-- ಬಿಸಿಲು ವ್ಯವಸ್ಥೆ ವಯೂಕ್ತಿಕ, ಮಾಹಿತಿಗಾಗಿ# 9448835606 9480682923