Programs/Events

ಸಾವಯವದಲ್ಲಿ ತರಕಾರಿ ಗಿಡಗಳ ವಿತರಣೆ

ಸಾವಯವದಲ್ಲಿ ತರಕಾರಿ ಗಿಡಗಳ ವಿತರಣೆ

30 September 2024

ಸಾವಯವ ಗ್ರಾಹಕ ಬಳಗ ಮಂಗಳೂರು ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೋಂತೀಮಾರು, ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರದಲ್ಲಿ 2025 ಜನವರಿ ತಿಂಗಳು ನಡೆಯಲಿರುವ ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ಸಂತರ್ಪಣೆಯ ಉದ್ದೇಶವಿಟ್ಟುಕೊಂಡು ಪರಿಸರದಲ್ಲಿ ಹಾಗೂ ಜನರಲ್ಲಿ ಸಾವಯವದಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಬೆಳೆಸುವ ನಿಟ್ಟಿನಲ್ಲಿ ವಿಷರಹಿತ ಆಹಾರ ವನ್ನು ಬಳಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾರ್ಯಕ್ರಮ ನಡೆಯಿತು.

ಸಾವಯವ ಕೃಷಿಕ ಗ್ರಾಹಕ ಬಳಗದ‌ ಅಧ್ಯಕ್ಷರು G R ಪ್ರಸಾದ್ ಆಡಳಿತ ಕಮಿಟಿಯ ಮೊಕ್ತೇಸರ ಶ್ರೀ ಸತೀಶ್ಚಂದ್ರ SR, ‌ಪಿಂಗಾರ ಕಂಪೆನಿ ವಿಟ್ಲ ದ ಅಧ್ಯಕ್ಷ ರಾದ ರಾಮ್ ಕಿಶೋರ್ ಪ್ರಗತಿಪರ ರೈತ ರಾದ ಗೋವಿಂದ ನಾಯಕ್ ಮತ್ತು ನಿಶ್ಚಲ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಸುಮಾರು 20,000ಕ್ಕೂಹೆಚ್ಚು ಸಾವಯವ ತರಕಾರಿ ಗಿಡಗಳನ್ನು ವಿತರಿಸಲಾಯಿತು. ಕುಮಾರಿ ಪ್ರಥ್ವಿ ಪ್ರಾರ್ಥನೆ ಹಾಡಿದರು. ಸಹ ಮೊಕ್ತೇಸರ ದಿವಾಕರ್ ಸ್ವಾಗತಿಸಿದರು. ಅರುಣ್ ಶರ್ಮಾ ಧನ್ಯವಾದ ನೀಡಿದರು. ಗಣೇಶ್ ಕಾಮತ್ ಸಹಕಾರ ನೀಡಿದರು. ಇಂತಹ ಸಾವಯವದ ಪರಿಕಲ್ಪನೆ ಎಲ್ಲೆಡೆ ಹರಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇಲ್ಲಿಂದ ಶುರುವಾಗಲಿ ಎಂದು ಅಧ್ಯಕ್ಷರು ಹಾರೈಸಿದರು. ಸಂತೋಷ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.