Programs/Events

ವಾರ್ಷಿಕ ಮಹಾಸಭೆಯ ಆಮಂತ್ರಣ

ವಾರ್ಷಿಕ ಮಹಾಸಭೆಯ ಆಮಂತ್ರಣ

11 August 2024

ವಾರ್ಷಿಕ ಮಹಾಸಭೆಯ ಆಮಂತ್ರಣ 2024

ದಿನಾಂಕ: 11-08-2024
ಸಮಯ: ಪೂರ್ವಾಹ್ನ 10.00 ಗಂಟೆಗೆ
ಸ್ಥಳ: ಶ್ರೀ ರಾಘವೇಂದ್ರ ಮಠ, ಮೊದಲ ಮಹಡಿ, ನೆಲ್ಲಿಕಾಯಿ ರಸ್ತೆ, ಮಂಗಳೂರು.
ಮಹಾಸಭೆಯ ನಡಾವಳಿ

1) ಪ್ರಾರ್ಥನೆ
2) ಸ್ವಾಗತ
3) ಇದುವರೆಗೆ ನಡೆದಿರುವ ನಮ್ಮ ಕಾರ್ಯಕ್ರಮದ ವರದಿ
4) ಲೆಕ್ಕಪತ್ರ ಮಂಡನೆ
5) ಹೊಸ ಆಡಳಿತ ಮಂಡಳಿಯ ಆಯ್ಕೆ
6) ನಮ್ಮ ಮುಂದಿನ ಕಾರ್ಯ ಚಟುವಟಿಕೆಯ ಮಾಹಿತಿ ಮತ್ತು ಅದರ ಅಂದಾಜು ಖರ್ಚು ವೆಚ್ಚಗಳು
7) ಸದಸ್ಯರ ಅಭಿಪ್ರಾಯ ಮತ್ತು ಪ್ರಶೋತ್ತರಗಳು
8) ಇತರ ವಿಷಯಗಳು (ಅಧ್ಯಕ್ಷರ ಅನುಮತಿ ಮೇರೆಗೆ)
9) ಅಧ್ಯಕ್ಷರ ನುಡಿ
10) ಭೋಜನ

ಸಾವಯವ ಕೃಷಿಕ ಗ್ರಾಹಕರ ಬಳಗ ಹತ್ತು ವರ್ಷಗಳಿಂದ ವಿಷಮುಕ್ತ ಅನ್ನದ ಬಟ್ಟಲು, ವಿಷಮುಕ್ತ ಜೀವನ ಎಂಬ ಮೂಲ ಉದ್ದೇಶ ಇಟ್ಟುಕೊಂಡು ಎಲ್ಲರನ್ನು ಜೊತೆ ಸೇರಿಸಿ ಹಲವಾರು ಜನ ಉಪಯೋಗಿ ಉತ್ತಮ ಕೆಲಸಗಳನ್ನು ನಿರಂತರ ಮಾಡುತ್ತಾ ಬರುತ್ತಿದೆ. ಈ ಕೆಲಸಕ್ಕೆ ಇನ್ನೂ ಜನ ಬೆಂಬಲ ದೊರೆತರೆ ಉತ್ತಮ ಜನಾಂದೋಲನ ರೂಪ ಪಡೆದು ಸಾವಯವ ಜಾಗೃತಿ ನಿತ್ಯ ಬದುಕಿನಲ್ಲಿ ಹೆಚ್ಚು ಜನರನ್ನು ತಲುಪಲು ಆಗುತ್ತದೆ ಎಂಬ ಕಾರಣಕ್ಕೆ ದಯವಿಟ್ಟು ಬನ್ನಿ ಪಾಲ್ಗೊಳ್ಳಿ.

ವಿ.ಸೂ.: ಮುಂಚಿತವಾಗಿ ಬರಹ ರೂಪದಲ್ಲಿ ಸಲಹೆ ಸೂಚನೆ ಅಭಿಪ್ರಾಯಗಳನ್ನು ಕೊಡಬಹುದು.